ಕರ್ನಾಟಕ
ಕೊರೊನಾ ಗೆದ್ದ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ- ಆಸ್ಪತ್ರೆಯಿಂದ ಬಿಡುಗಡೆ

ಮಂಗಳೂರು- ಕೊರೊನಾ ವೈರಸ್ ಬಗ್ಗೆ ಇಡೀ ದೇಶದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಆದರೇ ತಮ್ಮ 83ನೇ ವಯಸ್ಸಿನಲ್ಲಿಯೂ ಕೊರೊನಾ ಗೆದ್ದು ಇಂದು ಮನೆಗೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ವಾಪಸ್ ಆಗಿದ್ದಾರೆ.
ಜುಲೈ 4ರಂದು ಜನಾರ್ದನ ಪೂಜಾರಿಗೆ ಅವರಿಗೆ ಕೊರೊನಾ ಸೋಂಕು ಇರೋದು ಪತ್ತೆಯಾಗಿತ್ತು. ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಪೂಜಾರಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರಿಗೂ ಸಹ ಸೋಂಕು ಇರೋದು ಪತ್ತೆಯಾಗಿತ್ತು. ಇಂದು ಪೂಜಾರಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂಟ್ವಾಳದಮನೆಗೆ ವಾಪಸ್ ಆಗಿದ್ದಾರೆ.
ಕೊರೊನಾ ರೋಗಕ್ಕೆ ಯಾರೂ ಭಯಪಡಬೇಕಾಗಿಲ್ಲ, ಪ್ರತಿಯೊಬ್ಬರೂ ಆತ್ಮಸ್ಥೈರ್ಯವನ್ನು ಬೆಳಸಿಕೊಳ್ಳಿ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಉತ್ತಮ ಪೌಷ್ಠಿಕ ಆಹಾರ, ಕಷಾಯ ಸೇವನೆ ಮಾಡಿ, ಎಲ್ಲರೂ ಜಾಗೃತೆಯನ್ನು ವಹಿಸಬೇಕು ಎಂದು ಪ್ರಕಟಣೆಯಲ್ಲಿ ಪೂಜಾರಿ ಮನವಿ ಮಾಡಿದ್ದಾರೆ.