ದೇಶ & ವಿದೇಶ
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ?

ಅಯೋಧ್ಯ- ಅಯೋಧ್ಯ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಗೆ ಅನುಮತಿ ಕೋರಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಪ್ರಧಾನಿ ನರೇಂದ್ರ ಕಾರ್ಯಾಲಯಕ್ಕೆ ಪತ್ರ ಬರೆದಿದೆ. ಅಂದಾಜಿನ ಪ್ರಕಾರ ಆಗಷ್ಟ್ 5ರಂದು ಪೂಜೆ ನೆರವೇರಿಸಲು ಟ್ರಸ್ಟ್ ತಾತ್ಕಾಲಿಕ ದಿನಾಂಕ ನಿಗದಿ ಮಾಡಿದೆ.
ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರೆವೇರಸುವುದು ಬಹುತೇಕ ಖಚಿತವಾಗಿದೆ. ಅಯೋಧ್ಯಯಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಪೂಜೆಯ ಅಂತಿಮ ದಿನಾಂಕ ನಿಗದಿಯನ್ನು ಪ್ರಧಾನಿ ಕಚೇರಿಯ ನಿರ್ಮಾನ ಕೈಗೊಳ್ಳಲಿದ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪಂಚತ್ ರಾಯ್ ಹೇಳಿದ್ದಾರೆ.