ಕರ್ನಾಟಕ

ದೇಶದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಕೇಸ್; ಸೆಪ್ಟೆಂಬರ್ ವೇಳೆಗೆ 35 ಲಕ್ಷ ಕೇಸ್, ರಾಜ್ಯದಲ್ಲಿ 2 ಲಕ್ಷ ಕೇಸ್ – ಐಐಎಸ್ಸಿ ರಿಪೋರ್ಟ್

ಬೆಂಗಳೂರು – ರಾಜ್ಯದಲ್ಲಿ ಕೊರೊನಾ ಹಾವಳಿ ನಿಲ್ಲುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ ಕೊರೊನಾ ಸಂಖ್ಯೆ ರಾಕೆಟ್ ನಂತೆ ಏರಲಿದೆ. ಈ ಕುರಿತು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿಗಳ ತಂಡ ಪ್ರಬಂಧ ಮಂಡಿಸಿದೆ. ಇದರ ವರದಿಯ ಪ್ರಕಾರ
ಸೆಪ್ಟೆಂಬರ್ ವೇಳೆಗೆ 35 ಲಕ್ಷ ಕೇಸ್, ರಾಜ್ಯದಲ್ಲಿ 2 ಲಕ್ಷ ಕೇಸ್ ಇರಲಿದೆ, ಮುಂದಿನ ಮಾರ್ಚ್ ವೇಳೆಗೆ ಆರು ಕೋಟಿ ಕೊರೊನಾ ಕೇಸ್, 28 ಲಕ್ಷ ಜನ ಸಾವು ಸಂಭವಿಸಲಿದೆಯಂತೆ.
ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿಗಳಾದ ಪ್ರೊ.ಶಶಿಕುಮಾರ್ ಜಿ, ಪ್ರೊ ದೀಪಕ್ ಎಸ್ ಮತ್ತು ಅವರ ತಂಡದಿಂದ ಮಂಡನೆ ಮಾಡಲಿದ್ದಾರೆ. ಸರ್ವೆಯಲ್ಲಿ ವಿಜ್ಞಾನಿಗಳು ಮಂಡಿಸಿದ ವರದಿ ಸಾಕಷ್ಟು ಅಘಾತಕಾರಿ ವಿಷಯಗಳನ್ನು ಹೊರತರುತ್ತಿದೆ. ಸೆಪ್ಟೆಂಬರ್ 1ರ ವೇಳೆಗೆ ದೇಶದಲ್ಲಿ 35 ಲಕ್ಷ ಕೊರೊನಾ ಪ್ರಕರಣ ದಾಖಲಾಗಲಿದೆ. ಇದರಲ್ಲಿ 10 ಲಕ್ಷ ಸಕ್ರಿಯ ಕೊರೊನಾ ಕೇಸ್ ಇರಲಿದ್ದು, ಕರ್ನಾಟಕದಲ್ಲಿ 2.1 ಲಕ್ಷ, ಸಕ್ರಿಯ ಕೇಸ್ 71,300 ಇರಲಿದೆಯಂತೆ. ಈ ಪೈಕಿ ಮಹಾರಾಷ್ಟ್ರದಿಂದ 25,000, ದೆಹಲಿ 9,700, ಕರ್ನಾಟಕದಿಂದ 8,500, ತಮಿಳುನಾಡಿನಿಂದ 6,300, ಗುಜರಾತ್ ನಿಂದ 7,300 ಮಂದಿ ಮೃತಪಡಲಿದ್ದಾರೆ ಎಂದು ವರದಿ ಅಂದಾಜಿಸಲಾಗಿದೆ.
ಜನವರಿ 1ರ ವೇಳೆಗೆ ಈ ಸಂಖ್ಯೆ 2.9 ಕೋಟಿ, ಸಕ್ರಿಯ 60 ಲಕ್ಷ ಕೊರೊನಾ ಕೇಸು ಇರಲಿದೆ. ಕರ್ನಾಟಕದಲ್ಲಿ ಈ ಸಂಖ್ಯೆ 10.8 ಲಕ್ಷ, ಸಕ್ರಿಯ 3.7 ಲಕ್ಷ ಮತ್ತು 78,900 ಸಾವು ಇರಲಿದೆ.
ಇನ್ನು ಇದೇ ಪರಿಸ್ಥಿತಿ ಮುಂದುವರೆದರೆ ಮಾರ್ಚ್ 2021 ಅಂತ್ಯದ ವೇಳೆ ದೇಶದಲ್ಲಿ ಬರೋಬ್ಬರಿ 6.18 ಕೋಟಿ ಪ್ರಕರಣ ದಾಖಲಾಗಲಿದೆಯಂತೆ. ಇದರಲ್ಲಿ 82 ಲಕ್ಷ‌ ಸಕ್ರಿಯ ಕೊರೊನಾ ಕೇಸ್ ಇರಲಿದ್ದು, ಕಳವಳಕಾರಿ ವಿಚಾರವೆಂದರೆ 28 ಲಕ್ಷ ಜ‌ನ ಕೊರೊನಾದಿಂದ ಸಾಯಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಅಷ್ಟಕ್ಕೂ ಕೊವಿಡ್ ಕೇಸ್ ಲೆಕ್ಕಾಚಾರ ಅಂದಾಜಿಸಲಾಗಿದೆ‌. ರಾಷ್ಟ್ರೀಯ ಮಾನದಂಡಗಳ ಮೂಲಕ ಲೆಕ್ಕಾಚಾರ ಮಾಡಲಾಗಿದೆ. ರಾಜ್ಯದಲ್ಲಿನ ಪ್ರಸ್ತುತ ಪ್ರವೃತ್ತಿಗಳನ್ನು ಆಧರಿಸಿ ಸಲಹೆ ಪಡೆಯಲಾಗಿದೆ. ಬೇರೆ ಬೇರೆ ರಾಜ್ಯದಲ್ಲಿ ಬೇರೆ ಸಮಯದಲ್ಲಿ ಪೀಕ್ ಸ್ಥಿತಿ ತಲುಪುತ್ತದೆ. ಇದರ ಹಿನ್ನೆಲೆ ರಾಜ್ಯದ ನೈಜ ದತ್ತಾಂಶ ರಾಷ್ಟ್ರೀಯ ಪ್ರವೃತ್ತಿಯೊಂದಿಗೆ ಹೋಲಿಕೆ ಮಾಡಲಾಗಿದೆ. ರಾಜ್ಯದಲ್ಲಿನ ಕೊವಿಡ್ ಸಂಖ್ಯೆಗಳನ್ನು ರಾಷ್ಟ್ರೀಯ ಮಾನದಂಡಗಳೊಂದಿಗೆ ಲೆಕ್ಕ ಹಾಕಿ ಅಂದಾಜಿಸಲಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button
error: Content is protected !!